• +91 94485 79539
  • lokeshasiddagangaiah@gmail.com

History

ಶ್ರೀ ಗೋಮಾತೇಶ್ವರಿ ಅಮ್ಮನವರ ದೇವಸ್ಥಾನ

ಶಿವಗಂಗೆ ಕ್ಷೇತ್ರವು ದಕ್ಷಿಣ ಭಾರಥದಲ್ಲಿನ ಸಾಮಾಜಿಕ, ಧಾರ್ಮಿಕ ಹಾಗೂ ಶಿಲ್ಪ ಕಲೆಯಲ್ಲಿ ಪ್ರಾಚೀನ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೂ, "ದಕ್ಷಿಣ ಕಾಶಿ" ಎಂದೂ ಹೆಸರುವಾಸಿಯಾಗಿದೆ. ಸಹಸ್ರಮಾನದ ಸಂಸ್ಕೃತಿಯನ್ನು ಗೌರವಿಸುವ ಸ್ಥಾನವೆಂದು ಪ್ರಖ್ಯಾತವಾಗಿ ದೇಶ ವಿದೇಶಗಳ ವಿಚಾರವಾದಿಗಳ ಗಮನ ಸೆಳೆದಿದೆ. ಈ ಕ್ಷೇತ್ರವು ಸಮಸ್ತ ಜನಾಂಗದ ಅನುಕೂಲಕ್ಕಾಗಿ ಅನೇಕ ಮುಖದಲ್ಲಿ ರಚನಾತ್ಮಕ ಕಾರ್ಯ ಗೌರವದಲ್ಲಿ ತೊಡಗಿ ನವ ಭಾರತ ನಿರ್ಮಾದ ಕಾರ್ಯದಲ್ಲಿ ಶಕ್ತಿ ಮೀರಿ ಶ್ರಮಿಸಿದೆ. "ಸರ್ವೇಜನೋ ಸುಖೀನೋಭವಂತು" ಎಂಬ ಭಾರತೀಯ ಧರ್ಮದ್ರಷ್ಟಾರರ ಉಕ್ತಿ ಈ ಕ್ಷೇತ್ರದಲ್ಲೊ ಕಾರ್ಯರೂಪಕ್ಕೆ ಬಂದಿದೆ. ಈ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಧರ್ಮ ಸಹಿಷ್ಣುತೆ ನಿರಂತರವಾಗಿ ನಡೆಯುತ್ತಿದೆ.

ಶಿವಗಂಗಾ ಕ್ಷೇತ್ರವು ಇತಿಹಾಸ ಪ್ರಸಿದ್ದ ಹೊಯ್ಸಳದ ರಾಜನಾದ ವಿಷ್ಣುವರ್ದನನ ಪಟ್ಟ ಮಹರ್ಶಿ ನಾಟ್ಯರಾಣಿ ಶಾಂತಲೆಯ ತಪೋಭೂಮಿಯಾಗಿದ್ದು. ಪ್ರಾಕೃತಿಕ ಸೌಂದರ್ಯವನ್ನು ಮೈ ತುಂಬಿಕೊಂಡಿರುವ ಸುಮಾರು ೧೩೮೯.೫೮ ಮೀಟರ್ ಎತ್ತರದ ಗಿರಿ ಭವ್ಯ ಗವಿಗಳನ್ನು ಪವಿತ್ರ ತೀರ್ಥಕ್ಷೇತ್ರಗಳನ್ನು ಹೊಂದಿದೆ. ನೋಡಿದರೆ ಒಂದು ಕಡೆಯಲ್ಲಿ "ಶಿವಲಿಂಗದಂತೆಯಾ ಮತ್ತೊಂದು ಕಡೆಯಲ್ಲಿ ನೋಡಿದರೆ ಕೈಲಾಸ ಪರ್ವತದಂತಿರುವ" ಈ ಶೈಲದಲ್ಲಿ ಶ್ರೀ ಗಂಗಾದರೇಶ್ವರ ಮತ್ತು ಹೊನ್ನಮ್ಮ ದೇವಿಯ ಅವಾಸ ಸ್ಥಳವಾಗಿದೆ. ಬೆಟ್ಟದ ಬುಡದ ತೋಪಿನಲ್ಲಿ ಗ್ರಾಮದೇವತೆಯಾದ "ಮರಿಹೊನ್ನಮ್ಮ" ರವರ ದೇವಸ್ಥಾನವು ವಿಭೃಂಭಣೆಯಿಂದ ಕಂಗೊಳಿಸುತ್ತದೆ.

ಶಿವಗಂಗಾ ಬೆಟ್ಟದ ಅಸಾಪಾಸಿನಲ್ಲಿ ಸಿದ್ದಗಿರಿ, ಸಿದ್ದಗಂಗಾಗಿರಿ ಮಹಿಮರಂಗನ ಗಿರಿಗಳಿದ್ದು, ಪ್ರಾಚೀನ ಶೈನೇತಿಹಾಸದ ಅನಂತ ಅವಶೇಶಗಳಿಂದ ಕೂಡಿ ಬಿಗಿ ಬಳುಕುವಂತಿವೆ. ಈ ಕ್ಷೇತ್ರದ ಸುತ್ತಲೂ ಅನೇಕ ಗ್ರಾಮಗಳಿದ್ದು, ಅಲ್ಲಿ ಗುಹೆಗಳು, ಶಿವಲಿಂಗಳೂ, ಕೋಟೆ ಕೂತ್ತಲಗಳೂ, ಪ್ರಸಿದ್ಧ ದೇವಸ್ಥಾನಗಳು ಪವಿತ್ರ ತೀರ್ಥಗಳಿವೆ.

ಶಿವಗಂಗೆ ಹಾಗೂ ಮಹಿಮಾರಂಗ (ಶಿವನ ಅವತಾರ) ಬೆಟ್ಟಗಳ ಮಧ್ಯದಲ್ಲಿ ಶಿವಗಂಗೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಚಿಕ್ಕ ಗ್ರಾಮವಾದ ಗೊಟ್ಟಿಕೆರೆ ಗ್ರಾಮದಲ್ಲಿ ಪೂರ್ವಜರು ನಡೆಸಿಕೊಂಡು ಬಂದಿದ್ದ "ಶ್ರೀ ಗೋಮಾತೇಶ್ವರಿ" ಅಮ್ಮನವರ ಗುಡಿಯು ಅರ್ಧ ಕಟ್ಟಿ ಅದಕ್ಕೆ ಜಾತ್ರೆಗಳ ಸಮಯಮಲ್ಲಿ ಚಪ್ಪರವನ್ನು ಹಾಕಿ ಪೂಜೆ ಸಲ್ಲಿಸುತ್ತಿದ್ದರು. ಕೇಳಿದರೆ ನಮ್ಮ ಪೂರ್ವಜರು ದೇವಸ್ಥಾನವನ್ನು ಕಟ್ಟಲು ಹೋಗಿ ಚಪ್ಪಡಿಗಳನ್ನು ತಂದಾಗ ಎತ್ತಿನ ಗಾಡಿಗಳಲ್ಲಿದ್ದ ಚಪ್ಪಡಿಗಳು ಹಳ್ಳಕ್ಕೆ ತಿರುಗಿ ಬಿದ್ದವು. ಆದರೆ ಯಾರಿಗೂ ಪ್ರಾಣ ಹಾನಿಯಾಗಲಿಲ್ಲ. ಆದರೆ ದೇವಸ್ಥಾನ ಮಾತ್ರ ಅರ್ಧಕ್ಕೆ ನಿಂತಿತು ಎಂದು ಹೇಳುತ್ತಿದ್ದರು. ಶಿವಗಂಗೆಯಲ್ಲಿ ಬಹಳ ಅದ್ದೂರಿಯಾಗಿ ಸಂಕ್ರಮಣದಲ್ಲಿ ಒಮ್ಮೆ ದನಗಳ ಜಾತ್ರೆ ಹಾಗೂ ಇನ್ನೊಮ್ಮೆ ಹೊನ್ನಾದೇವಿ ಜಾತ್ರೆಯಲ್ಲಿ ಒಟ್ಟು ೨ ಬಾರಿ ದನಗಳ ಜಾತ್ರೆ ನಡೆಯುತ್ತವೆ. ಹಾಗೂ ಮಾಹಿಮಾರಂಗನ ಬೆಟ್ಟದ ಹತ್ತಿರ ಗುಡ್ಡೆ ಜಾತ್ರೆಯಲ್ಲಿ ಒಂದು ಬಾರಿ ದನಗಳ ಜಾತ್ರೆ ನಡೆಯುತ್ತದೆ. ಈ ಜಾತ್ರೆಗಳಿಗೆ ದನ-ಕರುಗಳನ್ನು (ಗೋವುಗಳು) ಕೊಳ್ಳಲು ಮಾರಲು- ಲಾಭ ಗಳಿಸಲು "ಶ್ರೀ ಗೋಮಾತೇಶ್ವರಿ" ಅಮ್ಮನವರಿಗೆ ಹರಕೆಗಳನ್ನು ಹೊತ್ತಿ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಹಾಗೂ ಕೆಲವರು ಮಕ್ಕಳಿಲ್ಲದವರು ಸಹಾ ಮಕ್ಕಳಾಗುವಂತೆ ಕರುಣಿಸು ತಾಯಿ ಎಂದು ಹರಕೆಗಳನ್ನು ಹೊತ್ತಿ ಜಾತ್ರೆಯ ಸಮಯದಲ್ಲಿ ಹರಕೆಗಳನ್ನು ಸಲ್ಲಿಸುತ್ತಿದ್ದರು. ಅಲ್ಲಿನ ಅಕ್ಕಪಕ್ಕದ ಗ್ರಾಮಸ್ಥರು.

ಹಳೆಯದಾಗಿದ್ದ ಚೋಳರ ಕಾಲದ "ಆಂಜನೇಯಸ್ವಾಮಿ ದೇವಸ್ಥಾನವು" ಗೊಟ್ಟಿಕೆರೆ ಗ್ರಾಮದಲ್ಲಿದ್ದು ಅದನ್ನು ಸಹಾ ಇಂದಿನ ದಿನಗಳಲ್ಲಿ ಗ್ರಾಮಸ್ಧರು ಭಕ್ತಾದಿಗಳು ಮತ್ತು ದಾನಿಗಳ ಸಹಕಾರದಿಂದ ಆಂಜನೇಯಸ್ವಾಮಿ ದೇವಸ್ಥಾನವು ಪೂರ್ಣಗೊಂಡಿರುತ್ತದೆ.

ಗೋಮಾತೇಶ್ವರಿ ಅಮ್ಮನವರ ಗುಡಿಯನ್ನು ಕಟ್ಟಲು ಹೋದಾಗ ಹಲವಾರು ಜನಗಳು ಗುಂಡಿಗಳ ಮಧ್ಯೆ ಇರುವ ಜಾಗದಲ್ಲಿ ನಾಲ್ಕಾರು ತಲೆಮಾರುಗಳ ಕಾಲದಿಂದಲೂ ಅರ್ಧ ಕಟ್ಟಡಕ್ಕೆ ನಿಂತ ಈ ಗುಡಿಯನ್ನು ಸಿಂಗರಿಸಲು ಬಂದರಿರುವರೆಂದು ಅಪ-ಹಾಸ್ಯ ಮಾಡುತ್ತಿದ್ದರು. ಆದರೆ ಈಗ ಕಟ್ಟಿರುವ ಗರ್ಭಗುಡಿಯ ಸ್ಥಾನದಲ್ಲಿ ಘಟ ಸರ್ಪವು ಕಾಣಿಸಿಕೊಂಡಿತು. ನಂತರ ಅವರುಗಳಿಗೆ ರಾತ್ರಿ ನಿದ್ದೆಯಲ್ಲಿಯೂ ಅದೇ ಘಟ ಸರ್ಪವನ್ನು ಕಂಡು ಭಯಬೀತಿಗೊಂಡು ಅಮ್ಮನವರ ದೇವಸ್ಥಾನದ ಬಳಿ ಬಂದು ತಪ್ಪಿನ ಹರಕೆ ಹೊತ್ತು ಅಮ್ಮನವರ ಗುಡಿಯನ್ನು ನಿರ್ಮಿಸುವ ಸಮಯದಲ್ಲಿ ಕಾಣಿಕೆಗಳನ್ನು ಅರ್ಪಿಸಿದ್ದಾರೆ.

ಗೋಮಾತೇಶ್ವರಿ ಅಮ್ಮನವರ ಗುಡಿಯು ಇರುವ ಜಾಗವು ಗೊಟ್ಟಿಕೆರೆ ಗ್ರಾಮದ ಮಾಜಿ ಛೇರ‍್ಮನ್ ಸಿದ್ದಗಂಗಯ್ಯನವರದ್ದು. ಮುಂಭಾಗಕ್ಕೆ ಇರುವ ಜಾಗವು ಚಿನ್ನಮರಿಯಪ್ಪನವರಿಗೆ ಸೇರಿದ್ದು, ಹಿಂಭಾಗಕ್ಕೆ ಬರುವ ಜಾಗವು ಚಿಕ್ಕತಿಮ್ಮಯ್ಯನವರಿಗೆ ಸೇರಿದ್ದು, ಆ ಜಾಗವನ್ನು ಈಗ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಿಕರು ದನ-ಕರುಗಳಿಗೆ ಕಾಯಿಲೆಗಳು, ಇತರೆ ವ್ಯಾಧಿಗಳು ಕಾಣಿಸಿಕೊಂಡಾಗ ಆಸ್ಪತ್ರೆಗಳಿಗೆ ತೋರಿಸದೆ ಅಮ್ಮನಲ್ಲಿಯೇ ಹರಕೆ ಮಾಡಿಕೊಂಡು ಗುಣಮುಖವಾದಾಗ ಹರಕೆಗಳನ್ನು ತೀರಿಸುತ್ತಿದ್ದರು. ಇದು ನಮ್ಮ ಪೂರ್ವಿಕರು ನಂಬಿಕೊಂಡು ಬಂದಿದ್ದ ಪದ್ದತಿ.