ಶಿವಗಂಗೆ ಕ್ಷೇತ್ರವು ದಕ್ಷಿಣ ಭಾರತದಲ್ಲಿನ ಸಾಮಾಜಿಕ, ಧಾರ್ಮಿಕ ಹಾಗೂ ಶಿಲ್ಪ ಕಲೆಯಲ್ಲಿ ಪ್ರಾಚೀನ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೂ, "ದಕ್ಷಿಣ ಕಾಶಿ" ಎಂದೂ ಹೆಸರುವಾಸಿಯಾಗಿದೆ. ಸಹಸ್ರಮಾನದ ಸಂಸ್ಕೃತಿಯನ್ನು ಗೌರವಿಸುವ ಸ್ಥಾನವೆಂದು ಪ್ರಖ್ಯಾತವಾಗಿ ದೇಶ ವಿದೇಶಗಳ ವಿಚಾರವಾದಿಗಳ ಗಮನ ಸೆಳೆದಿದೆ. ಈ ಕ್ಷೇತ್ರವು ಸಮಸ್ತ ಜನಾಂಗದ ಅನುಕೂಲಕ್ಕಾಗಿ ಅನೇಕ ಮುಖದಲ್ಲಿ ರಚನಾತ್ಮಕ ಕಾರ್ಯ ಗೌರವದಲ್ಲಿ ತೊಡಗಿ ನವ ಭಾರತ ನಿರ್ಮಾದ ಕಾರ್ಯದಲ್ಲಿ ಶಕ್ತಿ ಮೀರಿ ಶ್ರಮಿಸಿದೆ. "ಸರ್ವೇಜನೋ ಸುಖೀನೋಭವಂತು" ಎಂಬ ಭಾರತೀಯ ಧರ್ಮದ್ರಷ್ಟಾರರ ಉಕ್ತಿ ಈ ಕ್ಷೇತ್ರದಲ್ಲೊ ಕಾರ್ಯರೂಪಕ್ಕೆ ಬಂದಿದೆ. ಈ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಧರ್ಮ ಸಹಿಷ್ಣುತೆ ನಿರಂತರವಾಗಿ ನಡೆಯುತ್ತಿದೆ. ಶಿವಗಂಗಾ ಕ್ಷೇತ್ರವು ಇತಿಹಾಸ ಪ್ರಸಿದ್ದ ಹೊಯ್ಸಳದ ರಾಜನಾದ ವಿಷ್ಣುವರ್ದನನ ಪಟ್ಟ ಮಹರ್ಶಿ ನಾಟ್ಯರಾಣಿ ಶಾಂತಲೆಯ ತಪೋಭೂಮಿಯಾಗಿದ್ದು. ಪ್ರಾಕೃತಿಕ ಸೌಂದರ್ಯವನ್ನು ಮೈ ತುಂಬಿಕೊಂಡಿರುವ ಸುಮಾರು ೧೩೮೯.೫೮ ಮೀಟರ್ ಎತ್ತರದ ಗಿರಿ ಭವ್ಯ ಗವಿಗಳನ್ನು ಪವಿತ್ರ ತೀರ್ಥಕ್ಷೇತ್ರಗಳನ್ನು ಹೊಂದಿದೆ.